ಈ ಲೇಖನ ೧೯೪೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ ಹರಿಶ್ಚಂದ್ರ ಬಗ್ಗೆ. ೧೯೬೫ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ ಸತ್ಯ ಹರಿಶ್ಚಂದ್ರ ಬಗ್ಗೆ ಮಾಹಿತಿಗೆ ಈ ಲೇಖನವನ್ನು ಓದಿ. "ಹರಿಶ್ಚಂದ್ರ" ೧೯೪೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರವಾಗಿದೆ. ಸರಸ್ವತಿ ಸಿನಿ ಫಿಲಂಸ್ ಲಾಂಛನದಲ್ಲಿ ಈ ಚಿತ್ರವನ್ನು ಆರ್.ನಾಗೇಂದ್ರ ರಾಯರು ನಿರ್ಮಿಸಿ, ನಿರ್ದೇಶಿಸಿದರು. == ಕಥಾ ಸಾರಂಶ == ಹರಿಶ್ಚಂದ್ರ ಸತ್ಯಕ್ಕಾಗಿ ರಾಜ್ಯ,ಕೋಶ,ಹೆಂಡತಿ,ಮಕ್ಕಳನ್ನು ಬಿಟ್ಟು ಕಷ್ಟಪಡುವ ಪೌರಾಣಿಕ ಕಥಾನಕವೇ ಈ ಚಿತ್ರದ ಕಥಾ ಸಾರಾಂಶ.ವಿಶ್ವಾಮಿತ್ರನನನ್ನು ಖಳನಾಯಕನಂತೆ ಚಿತ್ರಿಸದೇ ತಮ್ಮಲ್ಲಿನ ತಪಃಶಕ್ತಿ ಧಾರರೆಯೆರುವ ಸಲುವಾಗಿ ಈ ಕಠಿಣ ಪರಿಕ್ಷೆಗಳನ್ನು ಒಡ್ಡುವಂತೆ ಚಿತ್ರನಾಟಕ ರಚಿಸಲಾಗಿತ್ತು. == ವಿಶೇಷತೆ == ಆರ್. ನಾಗೇಂದ್ರ ನಿರ್ದೇಶನದ ಮೊದಲ ಚಿತ್ರ ಇದಾಗಿದೆ.ರಾಜಯ್ಯಂಗಾರ್ ನಟಿಸಿರುವ ಮೊದಲ ಚಿತ್ರ ಕೂಡ. ಬೇರೆ ಭಾಷೆಗೆ ಡಬ್ ಆದ ಭಾರತದ ಮೊದಲ ಚಿತ್ರವಾಗಿದೆ. ತಮಿಳು ಭಾಷೆಗೆ ಡಬ್ ಆದ ಈ ಚಿತ್ರಕ್ಕೆ ಕನ್ನಡ ಕಲಾವಿದರೇ ಸಂಭಾಷಣೆ ಹೇಳಿದರು. ೧೧,೦೦೦ ಅಡಿಗಿಂತಲೂ ಯಾವುದೇ ಚಲಚಿತ್ರ ಉದ್ದವಿರಬಾರದೆಂಬ ಸರ್ಕಾರದ ನಿಷೇಧಾಜ್ಞೆಯಂತೆ ಆ ಮಿತಿಯೊಳಗೆ ಚಿತ್ರನ್ನು ತಯಾರಿಸಲಾಯಿತು. == ನಿರ್ಮಾಣ ಮತ್ತು ಬಿಡುಗಡೆ == ಸೆನ್ಸಾರ್ ಆದ ಬಳಿಕ ೧೦,೯೯೦ ಅಡಿ ಉದ್ದವಿದ್ದ ಈ ಚಲನಚಿತ್ರ, ಏಪ್ರಿಲ್ ೧೯೪೩ರಲ್ಲಿ ಬಿಡುಗಡೆಯಾಯಿತು. ಧಾರವಾಡದಲ್ಲಿ ಶತದಿನೋತ್ಸವ ಆಚರಿಸಿದ್ದಷ್ಟೇ ಅಲ್ಲ, ಹುಬ್ಬಳ್ಳಿಯಲ್ಲಿ ೨೯ ವಾರಗಳ ಕಾಲ ಪ್ರದರ್ಶಿತವಾದ ಮೊದಲ ಚಿತ್ರ ಇದು. == ಪಾತ್ರ ವರ್ಗ == ಎಂ.ವಿ. ಸುಬ್ಬಯ್ಯ ನಾಯ್ಡು (ಹರಿಶ್ಚಂದ್ರ) ಆರ್. ನಾಗೇಂದ್ರ ರಾವ್ (ವಿಶ್ವಾಮಿತ್ರ) ಜಿ.ವಿ.ಕೃಷ್ಣಮೂರ್ತಿ ರಾವ್ (ನಕ್ಷತ್ರಿಕ) ಬಿ.ಎಸ್. ರಾಜಯ್ಯಂಗಾರ್ (ನಾರದ) ಎಂ.ಜಿ.ಮರಿ ರಾವ್ (ಮೈತ್ರೇಯ) ಲಕ್ಷ್ಮಿ ಬಾಯಿ (ಚಂದ್ರಮತಿ) ಮಾ| ನರಸಿಂಹನ್ (ಲೋಹಿತ) == ಉಲ್ಲೇಖ ==